1. [QS]ನೀನು ನನ್ನ ಅಣ್ಣನ ಹಾಗಿದ್ದರೆ, ತಾಯಿ ಹಾಲನ್ನು ಕುಡಿಯುವ ಮಗುವಿನಂತೆ ಇದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು. [QE][QS2]ನಾನು ನಿನ್ನನ್ನು ಹೊರಗೆ ಕಂಡು [QE][QS]ನಿನಗೆ ಮುದ್ದಿಡುತ್ತಿದ್ದೆನು; [QE][QS2]ಆಗ ಯಾರೂ ನನ್ನ ಮೇಲೆ ದೋಷಾರೋಪಣೆ ಮಾಡುತ್ತಿರಲಿಲ್ಲ! [QE]
2. [QS]ನಾನು ನಿನ್ನನ್ನು ನಡೆಸಿಕೊಂಡು [QE][QS2]ನನ್ನ ತಾಯಿಯು ನನಗೆ ಉಪದೇಶಿಸಿದ ಕೋಣೆಗೆ ಬರುತ್ತಿದ್ದೆನು. [QE][QS]ನಾನು ನಿನಗೆ ಸಾಂಬಾರ ಪದಾರ್ಥಗಳನ್ನು ಸೇರಿಸಿದ ದ್ರಾಕ್ಷಾರಸವನ್ನು, [QE][QS2]ದಾಳಿಂಬೆ ಹಣ್ಣಿನ ರಸವನ್ನು ಕುಡಿಯಲು ಕೊಡುತ್ತಿದ್ದೆನು. [QE]
3. {#1ಪ್ರಿಯತಮೆ ಸ್ತ್ರೀಯರಿಗೆ } [QS]ಆಗ ನಿನ್ನ ಎಡಗೈ ನನಗೆ ತಲೆದಿಂಬಾಗಿ [QE][QS2]ನಿನ್ನ ಬಲಗೈ ನನ್ನನ್ನು ಅಪ್ಪಿಕೊಳ್ಳುತ್ತಿತ್ತು. [QE][PBR]
4. [QS]ಜೆರುಸಲೇಮಿನ ಸ್ತ್ರೀಯರೇ, [QE][QS2]ತಕ್ಕಕಾಲಕ್ಕೆ ಮೊದಲೇ ಪ್ರೀತಿಯನ್ನು ಹುಟ್ಟಿಸಿ ಬೆಳೆಯಿಸುವುದಿಲ್ಲವೆಂದು [QE][QS2]ನನಗೆ ಪ್ರಮಾಣ ಮಾಡಿರಿ. [QE]
5. {#1ಜೆರುಸಲೇಮಿನ ಸ್ತ್ರೀಯರು } [QS]ತನ್ನ ಪ್ರಿಯನನ್ನು ಒರಗಿಕೊಂಡು [QE][QS2]ಅಡವಿಯಿಂದ ಬರುತ್ತಿರುವ ಈ ಯುವತಿ ಯಾರು? [QE]{#1ಪ್ರಿಯತಮೆ ಪ್ರಿಯಕರನಿಗೆ } [QS]ನಾನು ನಿನ್ನನ್ನು ಸೇಬಿನ ಮರದ ಕೆಳಗೆ ಎಬ್ಬಿಸಿದೆನು. [QE][QS2]ನಿನ್ನ ತಾಯಿಯು ನಿನ್ನನ್ನು ಗರ್ಭಧರಿಸಿದ್ದು ಅಲ್ಲಿಯೇ. [QE][QS2]ನೀನು ಹುಟ್ಟಿದ್ದೂ ಅಲ್ಲಿಯೇ. [QE]
6. [QS]ನನ್ನನ್ನು ನಿನ್ನ ಹೃದಯದ ಮೇಲೆ ಮುದ್ರೆಯನ್ನಾಗಿಯೂ, [QE][QS2]ನಿನ್ನ ಬೆರಳಿನಲ್ಲಿರುವ ಮುದ್ರೆಯೊತ್ತಿದ ಉಂಗುರದಂತೆಯೂ ಇಟ್ಟುಕೋ. [QE][QS]ಪ್ರೀತಿಯು ಮರಣದಷ್ಟೇ ಬಲಿಷ್ಠ; [QE][QS2]ಕಾಮೋದ್ರೇಕವು ಸಮಾಧಿಯಷ್ಟೇ ಬಲಿಷ್ಠ. [QE][QS]ಅದರ ಜ್ವಾಲೆಗಳು ಧಗಧಗಿಸುವ ಬೆಂಕಿ. [QE][QS2]ಅದು ಅತಿ ತೀಕ್ಷ್ಣವಾದ ಅಗ್ನಿಯೇ. [QE]
7. [QS]ಜಲರಾಶಿಗಳು ಪ್ರೀತಿಯನ್ನು ನಂದಿಸಲಾರವು; [QE][QS2]ನದಿಗಳು ಪ್ರೀತಿಯನ್ನು ಮುಳುಗಿಸಲಾರವು. [QE][QS]ಒಬ್ಬನು ಪ್ರೀತಿಗೋಸ್ಕರ ತನ್ನ ಆಸ್ತಿಯನ್ನೆಲ್ಲ ಕೊಟ್ಟುಬಿಟ್ಟರೆ [QE][QS2]ಅವನು ಕೇವಲ ತಿರಸ್ಕಾರಕ್ಕೆ ಗುರಿಯಾಗುವನು. [QE]
8. {#1ಪ್ರಿಯತಮೆಯ ಸಹೋದರರು } [QS]ನಮಗೆ ಚಿಕ್ಕ ತಂಗಿಯಿದ್ದಾಳೆ, [QE][QS2]ಆಕೆಯ ಸ್ತನಗಳು ಇನ್ನೂ ಬೆಳೆದಿಲ್ಲ. [QE][QS]ಆಕೆಯ ನಿಶ್ಚಿತಾರ್ಥ ದಿನದಲ್ಲಿ [QE][QS2]ನಮ್ಮ ತಂಗಿಗೋಸ್ಕರ ನಾವೇನು ಮಾಡಬೇಕು? [QE][PBR]
9. [QS]ಆಕೆ ಕೋಟೆಯಾಗಿದ್ದರೆ [QE][QS2]ಅದರ ಮೇಲೆ ಬೆಳ್ಳಿಯ ಗೋಪುರಗಳನ್ನು ಕಟ್ಟುತ್ತಿದ್ದೆವು. [QE][QS]ಆಕೆ ಬಾಗಿಲಾಗಿದ್ದರೆ, [QE][QS2]ಶ್ರೇಷ್ಠವಾದ ದೇವದಾರು ಮರದ ಹಲಗೆಗಳಿಂದ ಅದನ್ನು ಹೊದಿಸುತ್ತಿದ್ದೆವು. [QE]
10. {#1ಪ್ರಿಯತಮೆಯು ಸಹೋದರರಿಗೆ ಕೊಡುವ ಉತ್ತರ } [QS]ನಾನು ಕೋಟೆ; [QE][QS2]ನನ್ನ ಸ್ತನಗಳೇ ಅದರ ಗೋಪುರಗಳು. [QE][QS2]ಹೀಗೆ ಸೊಲೊಮೋನನು ನನ್ನಲ್ಲಿ ತೃಪ್ತನಾದನು. [QE]
11. {#1ಪ್ರಿಯಕರ } [QS]ಸೊಲೊಮೋನನಿಗೆ ಬಾಲ್ಹಾಮೋನಿನಲ್ಲಿ ದ್ರಾಕ್ಷಿತೋಟವಿತ್ತು. [QE][QS2]ಅವನು ಅದನ್ನು ರೈತರಿಗೆ ಒಪ್ಪಿಸಿದನು. [QE][QS]ಪ್ರತಿಯೊಬ್ಬನು ಹಣ್ಣಿಗಾಗಿ [QE][QS2]ಒಂದು ಸಾವಿರ ಬೆಳ್ಳಿನಾಣ್ಯಗಳನ್ನು ಕೊಡಬೇಕಿತ್ತು. [QE][PBR]
12. [QS]ಆದರೆ ನನ್ನ ಸ್ವಂತ ದ್ರಾಕ್ಷಿತೋಟವು ನನ್ನೆದುರಿನಲ್ಲಿದೆ. [QE][QS2]ಸೊಲೊಮೋನನೇ, ಆ ಸಾವಿರ ಬೆಳ್ಳಿನಾಣ್ಯಗಳು ನಿನಗಿರಲಿ. [QE][QS2]ತೋಟವನ್ನು ನೋಡಿಕೊಳ್ಳುವವರಿಗೆ ಇನ್ನೂರು ಬೆಳ್ಳಿನಾಣ್ಯಗಳಿರಲಿ. [QE]
13. {#1ಪ್ರಿಯಕರ ಪ್ರಿಯತಮೆಗೆ } [QS]ಉದ್ಯಾನವನಗಳಲ್ಲಿ ವಾಸಿಸುವವಳೇ, [QE][QS2]ಗೆಳೆಯರು ನಿನ್ನ ಸ್ವರ ಕೇಳಬೇಕೆಂದಿದ್ದಾರೆ, ನನಗೂ ಸಹ ಕೇಳಿಸಲಿ. [QE]
14. {#1ಪ್ರಿಯತಮೆ ಪ್ರಿಯಕರನಿಗೆ } [QS]ನನ್ನ ಪ್ರಿಯನೇ, ತ್ವರೆಪಡು. [QE][QS2]ಸುಗಂಧಸಸ್ಯ ಪರ್ವತಗಳ ಮೇಲೆ ಸಾರಂಗದಂತೆಯೂ ಪ್ರಾಯದ ಜಿಂಕೆಯಂತೆಯೂ ಇರು. [QE]